ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಸಂಕ್ಷಿಪ್ತ ಪರಿಚಯ
ಅರುಣಚರಣಪದ್ಮಂ ಪಂಡಿತೈಃ ಸೇವ್ಯಮಾನಮ್ | ನರಹರಿಗುರುರೂಪಂ ನಿತ್ಯವಿಜ್ಞಾನವೇದ್ಯಮ್ | ಅಮರಗಿರಿನಿವಾಸಶ್ರೀನಿವಾಸಪ್ರಸಾದಾತ್ | ಪ್ರಕಟಿತನಿಜಚಿತ್ತಂ ಶ್ರೀಕೃಷ್ಣಯೋಗೀಂದ್ರಮೀಡೇ ||
ಯ
ಯಳ್ಳಂಬಳಸೆ ಎಂಬುದು ಕಡೂರು ತಾಲ್ಲೂಕಿಗೆ ಸೇರಿರುವ ಒಂದು ಅಗ್ರಹಾರ, ಹಳ್ಳಿ. ಕಳೆಯೇರಿದ್ದವು. ಆಗ್ಗೆ ಹಳ್ಳಿಗಳು ಈಗಿನ ಕಾಲಕ್ಕಿಂತ ಹೆಚ್ಚಿನ ಕಡೂರಿಗೆ ಎಂಟು-ಹತ್ತು ಮೈಲಿಗಳ ದೂರದಲ್ಲಿ ಯಾವ ರಸ್ತೆಯ ಸಂಬಂಧವೂ ಇಲ್ಲದ ಆ ಊರು ಆಗ್ಗೆ ಒಂದು ಮಾದರಿಯ ಹಳ್ಳಿಯಾಗಿತ್ತೆಂದರೆ ತಪ್ಪಾಗದು. ಊರ ಹೆಬ್ಬಾಗಿಲಿನಾಚೆಗೆ, ದೊಡ್ಡಿ, ನೀರಿನ ಕಟ್ಟೆ, ನೀರಿನ ಬಾವಿ, ಎರಡು-ಮೂರು ಅರಳಿಯ ಮರಗಳು, ಅವುಗಳಾಚೆ ಹನುಮರಾಯನ ಗುಡಿ, ಅದರಾಚೆಗೆ ಒಂದು ಕೆರೆ, ಕೆರೆಯ ಹಿಂದೆ ತೋಟಗದ್ದೆಗಳು, — ಇದು ಊರ ಹೊರಗಿನ ಚಿತ್ರ. ಊರೊಳಗೆ ಚಾವಡಿ. ಕೆಲವು ಬ್ರಾಹ್ಮಣರ ಮನೆಯ ಜೊತೆಗೆ ಗೌರವಾರ್ಹರಾದ ನಾಡಿಗರ, ಅಯ್ಯನವರ ವಂಶದ ಮನೆಗಳು, ಬಸವನಗುಡಿ, ಸೋಮೇಶ್ವರಗುಡಿ, ಬೀರದೇವರಗುಡಿ, ಹೊನ್ನಾಲದಮ್ಮನ ಗುಡಿ, ಚೆನ್ನಕೇಶವ ದೇವಾಲಯ, ಕುರುಬರು, ಕುಂಬಾರರು, ಅಕ್ಕಸಾಲಿಗರು, ವೀರ 2 ಶೈವರು ಮೊದಲಾದವರ ಕೇರಿಗಳೂ ಇದ್ದವು. ತೊರೆಯ ದಂಡೆಯ ಮೇಲೆ ಹಳ್ಳದಮ್ಮನ ಗುಡಿಯಿತ್ತು. ‘ವೇದಾವತಿ’ ಎಂಬ ಗ್ರಾಮದ ಕೆಂಡವನ್ನು ತುಳಿಯುವ ಉತ್ಸವವಾಗಲಿ, ಬೀರದೇವರ ಗುಡಿಯ ಬಾಳೆಯ ಪಟ್ಟೆಯ ಮಂಟಪವಾಗಲಿ, ಚೆನ್ನಕೇಶವನ ದೇವಸ್ಥಾನದಲ್ಲಿ ಕಾರ್ತಿಕದ ಮಂಗಳಾರತಿಗಳಾಗಲಿ, ಕೊಡುವ ಪನಿವಾರದ ಸವಿಯಾಗಲೀ, ಎಲ್ಲವೂ ಆನಂದದಾಯಕವಾಗಿದ್ದವು. ಪ್ರಾತಃ ಕಾಲದಲ್ಲಿ ಎದ್ದು ದಾರಿಯ ಕೆರೆಯಲ್ಲಿ ಅಥವಾ ಕಟ್ಟೆಯಲ್ಲಿ ಮುಖವನ್ನು ತೊಳೆದುಕೊಳ್ಳುವುದು, ಪಾಂಡವಗೀತೆಯನ್ನು ಉದಯರಾಗವನ್ನು ಇನ್ನೂ ಕೆಲವು ಪದಗಳನ್ನು ಹೇಳಿಕೊಳ್ಳುವುದು, ಕಾಡುಬೆರಣಿಯನ್ನು ಆಯ್ದು ಗೋಣೀಚೀಲಕ್ಕೆ ತುಂಬಿ ಕೊಳ್ಳುವುದು, ತೋಟಕ್ಕೆ ಹೋಗಿ ಹೊಸದಾಗಿ ಹಾಕಿಸಿದ್ದ ತೆಂಗಿನ ಸಸಿಗಳಿಗೆ ಬೆರಣಿಯ ಗೊಬ್ಬರವನ್ನು ಹಾಕಿ ಹುಳು ನೋಡುವುದು, ಅಲ್ಲಿ ಬಿದ್ದಿದ್ದ ತೆಂಗಿನಕಾಯಿ, ಸೋಗೆ ಮುಂತಾದವುಗಳನ್ನು ಕೂಡಿಹಾಕಿ ಕೊಂಡು, ಹೂ, ತುಳಸಿ, ಕರಿಬೇವು, ಸೊಪ್ಪು, ತರಕಾರಿ ಮುಂತಾದವನ್ನು ಮನೆಗೆ ತರುವುದು ಇವೇ ಮೊದಲಾದವು ಬೆಳಗಿನ ಕಾಲದ ನಿತ್ಯಗಟ್ಟಲೆಯ ಕೆಲಸ. ಕೆಲವರು ಬೆಳಗಿನ ಸಮಯದಲ್ಲಿ ಸ್ನಾನ-ಆಹ್ನಿಕ-ದೇವರ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಹಾಗೆಯೇ ಊಟದ ಎಲೆ ಹಚ್ಚುವಿಕೆ, ಭೋಜನ, ಒಂದೆರಡು ಗಂಟೆಯ ನಂತರ ಕೋಣೆಯಿಂದ ಫಲವತ್ತಾದ, ರಸಭರಿತವಾದ ಹಣ್ಣು, ಬೆಲ್ಲ ಮುಂತಾದವುಗಳನ್ನು ಕಲೆಯಿಸಿ ಮಕ್ಕಳಾದಿಯಾಗಿ ಎಲ್ಲರಿಗೂ ಹಂಚುವಿಕೆ, ಕೇವಲ ವಿನೋದಕ್ಕಾಗಿ ಚದುರಂಗ, ಗಂಜೀಫ ಆಟಗಳು, 3 ಸಾಯಂಕಾಲ ಹುಡುಗರಿಗೆ ಬಾಯಿಪಾಠ ಸಂಧ್ಯಾವಂದನಾದಿಗಳ ಆಚರಣೆ, ದೇವರಿಗೆ ಮಂಗಳಾರತಿ ತದನಂತರ ಊಟ. ಆಗಿನ ಯಳ್ಳಂಬಳಸೆಯ ಮನೆತನದವರು, ನಾಡಿಗ ಆಸ್ತಿಕಮಹಾಜನರೂ ಇದ್ದರು. ಮನೆಯಲ್ಲೂ ಗಣಪತಿಯನ್ನು ಮಾಡಿಕೊಳ್ಳುತ್ತಿದ್ದರು. ಕೆಲವು ಗಣ್ಯರ ಪೈಕಿ ಮನೆತನದವರು ಅಯ್ಯನವರ ಮೊದಲಾದ ಊರಿನಲ್ಲಿ ಹಬ್ಬದ ಕಾಲಕ್ಕೆ ಎಲ್ಲರ ಅವರವರೇ ಬಲು ಉತ್ಸಾಹದಿಂದ ಇವರಲ್ಲಿ ಮುಖ್ಯವಾಗಿ ಅಯ್ಯನವರ ಮನೆತನದ ವೇ||ಬ್ರ||ಶ್ರೀ ಕೃಷ್ಣಭಟ್ಟರ ಮತ್ತು ವೇ||ಬ್ರ||ಶ್ರೀ ವೆಂಕಟಸುಬ್ಬಯ್ಯನವರ ಗಣಪತಿಗಳು ಮಿಕ್ಕ ಎಲ್ಲದಕ್ಕಿಂತಲೂ ಹೆಚ್ಚು ಕಳೆಯೇರಿದಂತೆ ತೋರುತ್ತಿತ್ತು. ಆದರೆ ಶ್ರೀ ಕೃಷ್ಣಭಟ್ಟರ ಮನೆಯ ಕಾಗದದ ಮಹಲಿನ ಅಲಂಕಾರಕ್ಕೆ ಮಿಗಿಲಿಲ್ಲವೆಂದೇ ನನ್ನ ಭಾವನೆ – ಹೀಗೆಂದು ಪರಮಪೂಜ್ಯ ಹೊಳೇನರಸೀಪುರದ ಶ್ರೀಗಳು ತಮ್ಮ ಆತ್ಮಚರಿತೆಯಲ್ಲಿ, ಆ ಅಯ್ಯನವರ ಮನೆತನದವರನ್ನು ಭಕ್ತಿಯಿಂದ ಸ್ಮರಿಸಿಕೊಂಡಿರುತ್ತಾರೆ. “ಅಯ್ಯ” ನವರ ಕೃಷ್ಣಭಟ್ಟರ ಮನೆಯನ್ನು ಒಂದು ವೇದಾಗಾರವೆಂದು ಕರೆಯಬಹುದು. ಅವರ ಮನೆಗೆ ನಾನು (ಅಂದರೆ, ಪರಮ ಪೂಜ್ಯ ಶ್ರೀಚರಣರು) ಹೋದಾಗಲೆಲ್ಲ ಬೆಟ್ಟದ ಪುರದ ಸೊಪ್ಪನ್ನು ಬಿಡಿಸುತ್ತಾ ಋಗ್ವೇದವನ್ನು ಹೇಳಿಕೊಡುತ್ತಿದ್ದ ದೃಶ್ಯದ ಚಿತ್ರವು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮಂತ್ರವನ್ನು ಹೇಳುತ್ತಾ ಬಿಡಿಸಿದರೆ ಸೊಪ್ಪು ಚೆನ್ನಾಗಿ ಬಿಡುತ್ತದೆ ಎಂಬ ಭಾವನೆಯು ನನ್ನ ಎಳೆಯ ಮನಸ್ಸಿಗೆ ತಾಕುತ್ತಿತ್ತು. ಭಟ್ಟರು ಪರಮಸಾತ್ವಿಕರು. ಅವರು ಶ್ರೀ ಕೃಷ್ಣಯೋಗೀಂದ್ರರ 4 ಮನೆತನದವರೆಂದೂ, ಅರಸಿಕೆರೆಯ ಬಳಿಯಿರುವ ಮಾಲೇಕಲ್ಲು ತಿರುಪತಿಯ ವೇಂಕಟರಮಣನ ಸೇವೆಯನ್ನು ಮಾಡಿದ್ದಕ್ಕಾಗಿ, ಅವರ ಮನೆತನದವರಿಗೆ ಅಗ್ರತೀರ್ಥ ಮರ್ಯಾದೆ ಈ ವರೆಗೂ ನಡೆದುಕೊಂಡು ಬಂದಿದೆಯೆಂದೂ, ಈ ಮರ್ಯಾದೆಗೆ ನಡುವೆ ಯಾವದೋ ಅಡ್ಡಬಂದಾಗ ಭಟ್ಟರು ದೊರೆಗಳ ತನಕ ದೂರು ಬಂದರೆಂದೂ ತೆಗೆದುಕೊಂಡು ಈಚೆಗೆ ನನಗೆ ಹೋಗಿ ಅದನ್ನು ತಿಳಿಯಬಂತು. ಉಳಿಸಿಕೊಂಡು ನವರಾತ್ರೆಯಲ್ಲಿ ನಮ್ಮೂರಿನಲ್ಲಿ ಮೂರು ನಾಲ್ಕು ಮನೆಗಳಲ್ಲಿ ರಾಮಾಯಣ ಪಾರಾಯಣವೂ, ರಾಮಪಟ್ಟಾಭಿಷೇಕವೂ ನಡೆಯುತ್ತಿತ್ತು. ಆದರೆ ಅಯ್ಯನವರ ಕೃಷ್ಣಭಟ್ಟರ ಮನೆಯ ಪಟ್ಟಾಭಿಷೇಕವು ನನ್ನ (ಶ್ರೀಗಳ) ಮನಸ್ಸಿನಲ್ಲಿ ಹೆಚ್ಚಿನ ಮುದ್ರೆಯನ್ನು ಒತ್ತಿರುತ್ತದೆ. ಅವರ ಮನೆಯ ಶ್ರೀರಾಮನ ಪಟ್ಟಾಭಿಷೇಕದ ಕಾಲಕ್ಕೆ ಬಾಣಾವರದ ವೇ||ಬ್ರ||ಶ್ರೀ|| ಲಕ್ಷ್ಮೀನಾರಾಯಣ ಶಾಸ್ತ್ರಿಗಳು ಪೂರ್ವ ಕಥೆಯನ್ನು ಹೇಳಿದ್ದೂ, ಯಗಟಿಯಿಂದ ವೇದ ಮೂರ್ತಿಗಳಾದ ಚನ್ನಭಟ್ಟರು, ಸೂರಭಟ್ಟರು ಮುಂತಾದ ವೈದಿಕರು ಬಂದು (ನನಗೆ ತಿಳಿಯದ) ಯಾವುದೋ ಒಂದು ಶಾಸ್ತ್ರಾರ್ಥ ವಿಚಾರವನ್ನು ಮಾಡಿದ್ದೂ ಕೃಷ್ಣಭಟ್ಟರ ವಿಷಯದಲ್ಲಿ ನನಗೆ (ಶ್ರೀಗಳಿಗೆ) ಹೆಚ್ಚಿನ ಗೌರವವನ್ನುಂಟುಮಾಡಿತ್ತು. ವೇದಮೂರ್ತಿಗಳಾದ ಕೃಷ್ಣಭಟ್ಟರ ಮಕ್ಕಳು ಅಸಹಾಯ ಶೂರರು. ಕೆರೆಯಹಿಂದೆ ವೇದವನ್ನು ಹೇಳಿಕೊಳ್ಳುತ್ತಾ ನೆಲವನ್ನು ಅಗೆದು ಅಡಕೆ, ಬಾಳೆ, ಸೇವಂತಿಗೆ ಹೂ ಮುಂತಾದವುಗಳನ್ನು ಬೆಳೆದು ಒಂದು ನಂದನವನವನ್ನೇ ಎಬ್ಬಿಸಿದ್ದರು. ಇದೇ ಪ್ರವೃತ್ತಿಯವರು ಅಯ್ಯನವರ ಶ್ರೀ ವೇಂಕಟಸುಬ್ಬಯ್ಯನವರು. ಯಳ್ಳಂಬಳಸೆಯೆಂಬ 5 ಕರ್ಣಾಟಕ ರಾಜ್ಯದ ಅಗ್ರಹಾರವು, ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಡೂರು ತಾಲ್ಲೂಕಿಗೆ ಸೇರಿರುವ ಒಂದು ಪವಿತ್ರ ಕ್ಷೇತ್ರ. ಸಾಧಕರ, ಯತೀಂದ್ರರ, ಸಿದ್ಧರ ಬೀಡಾದ ಈ ಕ್ಷೇತ್ರವು, ಮಹಿಮಾತಿಶಯ ಸಂಪನ್ನರೂ ಲೋಕಹಿತೈಷಿಗಳೂ, ಜ್ಞಾನಿಶ್ರೇಷ್ಠರೂ ಆದ ಮೂವರು ಯತಿಪುಂಗವರಿಗೆ ಜನ್ಮ ನೀಡಿರುತ್ತದೆ. ಆ ಯತಿ ಶ್ರೇಷ್ಠರೇ ಪರಮಪೂಜ್ಯ 1) ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರು, 2) ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು. ಪೂರ್ವಾಶ್ರಮದಲ್ಲಿ ಯಳ್ಳಂಬಳಸೆ ಪ್ರಸಿದ್ಧರಾಗಿದ್ದು ಸಂನ್ಯಾಸಾಶ್ರಮವನ್ನು ತರುವಾಯ (ವೈ.) ಸ್ವೀಕಾರಮಾಡಿ, ಸುಬ್ಬರಾಯರೆಂದು ತುರೀಯಾಶ್ರಮವಾದ ಯಶಃಕಾಯರಾದ, ಹೊಳೆನರಸೀಪುರದ ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು. ಮತ್ತು 3) ಶ್ರೀ ಶ್ರೀ ಶ್ರೀ ಜ್ಞಾನಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು. ಇವರ ಪೂರ್ವಾಶ್ರಮದ ಚಿರಪರಿಚಿತವಾದ ಹೆಸರು ವೇದಾಂತ ಶಿರೋಮಣಿ, ವಿದ್ವಾನ್ ವೈ ಎಸ್ ವಿಠ್ಠಲಶಾಸ್ತ್ರಿಗಳೆಂದು. ಮೈಸೂರು ಮಹಾರಾಜ ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿ ಹೊಳೆನರಸೀಪುರದ ಶ್ರೀಗಳ ಪಟ್ಟ ಶಿಷ್ಯರಾಗಿದ್ದು, ಅವರೊಂದಿಗೆ ಗ್ರಂಥರತ್ನಮಾಲೆಯ ಶ್ರೀ ಸಂಪಾದಕರಾಗಿ ಜಯಚಾಮರಾಜೇಂದ್ರ ಜಗದ್ಗುರು ಶ್ರೀ ಶಂಕರ 6 ಭಗವತ್ಪಾದಾಚಾರ್ಯರ ಪ್ರಸ್ಥಾನ ತ್ರಯ ಭಾಷ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಸಂನ್ಯಾಸಪೂರ್ವದಲ್ಲಿ, ಸಖರಾಯಪಟ್ಟಣದ ಶ್ರೀ ಗುರುನಾಥರ ತೀರ್ಥರೂಪರವರಿಗೂ ಅನಂತರ ಗುರುನಾಥರಿಗೂ ಹಲವಾರು ವರ್ಷಗಳು ಆಚಾರ್ಯರಾಗಿದ್ದರು.
ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರು
ಶ್ರೀ
ಶ್ರೀ ಕೃಷ್ಣಯೋಗೀಂದ್ರರು ಚಿಕ್ಕಂದಿನಿಂದಲೂ ಅಧ್ಯಾತ್ಮ ವಿದ್ಯೆಯಲ್ಲಿ ನುರಿತವರಾಗಿದ್ದರು; ಹಾಗೆಯೇ ಲೋಕಹಿತದೃಷ್ಟಿಯನ್ನು ಜೀವನ ಪರ್ಯಂತ ಅನುಷ್ಠಾನದಲ್ಲಿಟ್ಟು ಕೊಂಡಿದ್ದರು. ಗರ್ಭಾಷ್ಟಮದಲ್ಲಿ ಉಪನೀತರಾದ ಅವರು ಮಹಾಪರಿವ್ರಾಜಕರಾಗಿದ್ದು, ಭರತಖಂಡದ ಬಹುಭಾಗವನ್ನು ಸಂಚರಿಸಿ ಭಾರತೀಯರ ಸನಾತನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನಕ್ಕೆ ಅಮೂಲ್ಯವಾದ ಕಾರ್ಯವೆಸಗಿದ್ದಾರೆ. ಶ್ರೀ ಕೃಷ್ಣಯೋಗೀಂದ್ರರು ಬ್ರಹ್ಮನಿಷ್ಠರೂ, ಜೀವನ್ಮುಕ್ತರೂ ಮತ್ತು ಆಸ್ತಿಕರಿಗೆ ಆದರ್ಶ ಚರಿತರೂ ಆಗಿದ್ದರು. ಮಹತ್ತಾದ ಪುಣ್ಯ ಪುಂಜದಿಂದ, ಧರ್ಮರಕ್ಷಕನಾದ, ಮಹಿಮಾತಿಶಯಸಂಪನ್ನ ಭಗವಂತನ ಕೃಪಾತಿಶಯದಿಂದ ಮತ್ತು ಭಾಗ್ಯಪರಿಪಾಕದಿಂದ ಜನ್ಮವೆತ್ತಿದರು. ಇಂಥಹ ಸದ್ಗುರುಗಳ ಪವಿತ್ರ ಚರಿತ್ರೆಯ ಚಿಂತನವು ಇಹ-ಪರಗಳ ಶ್ರೇಯಸ್ಸಿಗೆ ಕಾರಣವಾಗಿರುತ್ತದೆ. ಪರಮಹಂಸ ಪರಿವ್ರಾಜಕಾಶ್ರಮವನ್ನು ಸ್ವೀಕರಿಸಿ, ವೇದಾಂತರಹಸ್ಯಜ್ಞರಾಗಿದ್ದರೂ, ಸಂಪ್ರದಾಯ ಉದ್ದೇಶದಿಂದ, ಗುರೂತ್ತಮರನ್ನು ಪರಿಪಾಲನೆಯ ಆಶ್ರಯಿಸಿ, ಮಹಾವಾಕ್ಯಾದ್ಯುಪದೇಶಗಳನ್ನು ಪಡೆದರು. ಲೋಕ ಸಂಗ್ರಹ ದೃಷ್ಟಿಯಿಂದ ಭಾರತ ಭೂಭಾಗದಲ್ಲಿ 7 ಸಂಚರಿಸಿ ಅನ್ವರ್ಥವಾಗಿ ಪರಿವ್ರಾಜಕರೆನಿಸಿದರು. ಬಂದರು. ಸ್ವಕೃತವಾದ ಸರ್ವತ್ರ ತನ್ಮೂಲಕ ಅನೇಕ ಪಂಡಿತ ಶಿಷ್ಯರು ಬೆಳಕಿಗೆ ಮತ್ತು ಪ್ರಮಾಣಭೂತವಾದ ಭಾಷ್ಯಾದಿಪ್ರಬಂಧಗಳನ್ನು ಪ್ರಚಾರಪಡಿಸಿದರು. ಅರ್ಥಪೂರ್ಣವೈದಿಕ ಪರಂಪರೆಯಿಂದ ಬಂದಂತಹ ಸಮಯಾಚಾರಗಳನ್ನು ತಿಳಿಯಪಡಿಸಿದರು. ವಿವರವಾಗಿ ಅವರ ಪಾಂಡಿತ್ಯವು ಅಖಂಡವಾಗಿದ್ದಿತು. ಮೇಧಾ ಶಕ್ತಿಯೂ ಅಸಾಧಾರಣ. ಸರಸವೂ ಸರಳವೂ ಆದ ವಾಕ್‍ಸಂಪತ್ತು. ತೇಜಸ್ಸು-ಯಶಸ್ಸು ಮತ್ತು ತಪಸ್ಸುಗಳ ಗಣಿಯಾಗಿದ್ದರು. ಮಹಾಮಹಿಮೆಯಿಂದ ಕೂಡಿದ್ದರೂ, ಸದ್ಗುರುಗಳು, ಮಹಿತಾತ್ಮರಾದ ಈ ಬಾಲ್ಯದಲ್ಲಿ ವೇದ-ವೇದಾಂತ ಭಾಗಗಳನ್ನು ಅಭ್ಯಾಸ ಮಾಡಿದರು. ಸದ್ಗುರುಗಳ ನ್ಯಾಯ ಮೀಮಾಂಸಾದಿ ಶಾಸ್ತ್ರಗಳಲ್ಲಿ ಪರಿಣತಿ ಪಡೆದರು. ಪಾದುಕೆಗಳನ್ನು ಆರಾಧಿಸಿ ಅನುಗೃಹೀತರಾದರು. ಸಂಪ್ರದಾಯವರ್ತಿಗಳಾಗಿ ವೇದಾಂತ ಸಿದ್ಧಾಂತಗಳನ್ನು ಅರಿತು, ಶಿಷ್ಯರನ್ನು ತಯಾರು ಮಾಡಿದರು. ಪರಿವ್ರಾಜಕರಾಗಿ ಸಂಚರಿಸುತ್ತಾ ಸ್ವಧರ್ಮಾಚರಣ ನಿಯಮಗಳನ್ನು ಪ್ರಕಾಶಗೊಳಿಸಿದರು. ಪಾದಯಾತ್ರೆಯಿಂದ ಧರಿತ್ರೀತಲವನ್ನು ಪವಿತ್ರಗೊಳಿಸಿದರು. ತಮ್ಮ ಉಪದೇಶಾಮೃತವೆಂಬ ಸುವೃಷ್ಟಿಯಿಂದ ಹಾಗೂ ತಪಶ್ಶಕ್ತಿಯಿಂದ ಕ್ರಮವಾಗಿ ದುರ್ಭಿಕ್ಷಾದಿಗಳನ್ನು ಮತ್ತು ದುರಾಚಾರವನ್ನು ದೂರ ಮಾಡಿದರು. ಸಾಧುಜನರನ್ನು ಸಂರಕ್ಷಿಸಿದರು, ಧರ್ಮಶಾಲೆಗಳನ್ನು ಕಟ್ಟಲು ಪ್ರೋತ್ಸಾಹಿಸಿದರು. ಗುಡಿಗೋಪುರಗಳನ್ನು ಜೀರ್ಣೋದ್ಧಾರ ಮಾಡಿದರು. 8 ತಾವಾದರೋ ಏನನ್ನೂ ಬಯಸದೆ ಪರತತ್ತ್ವಚಿಂತನೆಯಲ್ಲಿ ತಲ್ಲೀನರಾಗಿ ಸ್ವಾತ್ಮಾರಾಮರಾದರು. ಇಂಥಹ ಮಹಾಮಹಿಮರಾದ ನಮ್ಮ ಆಚಾರ್ಯರ ಗುಣವರ್ಣನೆಯಾನ್ನಾಗಲೀ ಅಥವಾ ಚರಿತ್ರಲೇಖನವನ್ನಾಗಲಿ ಬರೆಯಲು ಪ್ರಯತ್ನಿಸುವುದು ಉಪಹಾಸ್ಯಕ್ಕೆ ಎಡೆಯಾಗುತ್ತದೆ, ಹೇಗೆಂದರೆ ಕುಳ್ಳನು ಎತ್ತರದ ಮರದಲ್ಲಿರುವ ಹಣ್ಣನ್ನು ಬಯಸುವಂತೆ. ಆದಾಗ್ಯೂ ನಿರಂತರ ಗುರುಸ್ಮರಣೆಯ ಲಾಭೈಕದೃಷ್ಟಿಯುಳ್ಳ ಗುರುಬಂಧುಗಳಾದ ನಮಗೆ ಇಂತಹ ದುಃಸಾಧ್ಯವಾದ ಕರ್ಮದಲ್ಲಿ ಪ್ರವೃತ್ತಿಯುಂಟಾಗಿರುವುದು ಅನುಚಿತವಾಗಲಾರದು. ಜನ್ಮ ಸರ್ವಾನುಗ್ರಹಕರ್ತೃತ್ವಾದ್ ಈಶ್ವರಃ ಕರುಣಾನಿಧಿಃ | ಯಥಾಶಕ್ತಿ ಆಚಾರ್ಯರೂಪಮಾಸ್ಥಾಯ ದೀಕ್ಷಯಾ ಮೋಚಯೇತ್ ಪಶೂನ್ || “ಕರುಣಾನಿಧಿಯಾದ ಈಶ್ವರನು, ಎಲ್ಲರನ್ನೂ ರಕ್ಷಿಸಬೇಕೆಂಬ ಜವಾಬ್ದಾರಿಯಿಂದ, ಶ್ರೀಗುರುರೂಪವನ್ನು ತಾಳಿ ದೀಕ್ಷೆಯಿಂದ, ಎಲ್ಲ ಜೀವಿಗಳನ್ನೂ (ಬಂಧನದಿಂದ) ಮೋಕ್ಷವನ್ನು ಕರುಣಿಸುತ್ತಾನೆ”. ಬಿಡುಗಡೆಮಾಡುತ್ತಾನೆ, ಜೀವಿಗಳಿಗೆ “ಪ್ರಾಪ್ಯ ಪುಣ್ಯಕೃತಾಂ ಲೋಕಾನ್, ಉಷಿತ್ವಾ ಶಾಶ್ವತೀಃ ಸಮಾಃ | ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋ„ಭಿಜಾಯತೇ” || ಕಲ್ಯಾಣ ಕಾರ್ಯವನ್ನು ದುರ್ಗತಿಯುಂಟಾಗಲಾರದು. ಮಾಡಿದ ಯಾವನೊಬ್ಬನಿಗೂ ಯೋಗದಲ್ಲಿ ಭ್ರಷ್ಟನಾದವನು, (ಯೋಗದ 9 ಪೂರ್ಣತೆಗಾಗಿ) ಪುಣ್ಯವಂತರ ಲೋಕಗಳನ್ನು ಸೇರಿ ಬಹುವರ್ಷ ಅಲ್ಲಿ ವಾಸವಾಗಿದ್ದು, ಕಟ್ಟಕಡೆಗೆ ಪರಿಶುದ್ಧರೂ ಶ್ರೀಮಂತರೂ ಆದ ಜ್ಞಾನಿಗಳಾದ ಯೋಗಿಗಳ ಮನೆಯಲ್ಲೇ ಜನಿಸುತ್ತಾನೆ. – ಭಗವದ್ಗೀತೆ 6-41 ಶ್ರೀ ಕೃಷ್ಣಯೋಗೀಂದ್ರರು ಪೂರ್ವ (ಜನ್ಮ)ದಲ್ಲಿ ಯೋಗಮಾರ್ಗದ ಸಾಧನೆಯ ಶಿಖರ ತಲುಪಿ ಪುಣ್ಯಕೃತವಾದ ಲೋಕಗಳಲ್ಲಿ ವಾಸಮಾಡಿ ಅದರ ಪೂರ್ಣತೆಗಾಗಿ, ಫಲಸಿದ್ಧಿಗಾಗಿ ಉದಾತ್ತವೂ ಸುಸಂಸ್ಕೃತವೂ ಆದ ಪುನರ್ಜನ್ಮವನ್ನು (ಶ್ರೀ ಕೃಷ್ಣಯೋಗಿಂದ್ರರಾಗಿ) ಪಡೆದಿರಬಹುದು. ಇದು ಭಗವದ್ಗೀತೆಯಲ್ಲಿ ಬರುವ ಭಗವದ್ವಚನವು. ಅಧ್ಯಾತ್ಮ ವಿದ್ಯೆಗೆ ಅವಶ್ಯಕವಾದ, ಅಹಿಂಸೆ, ಸತ್ಯ, ಆರ್ಜವ, ಸಹನೆ, ನಿತ್ಯಾನಿತ್ಯವಿವೇಕ, ಇಹಾಮುತ್ರವಿರಾಗ, ಶಮ-ದಮಾದಿಗಳು ಜ್ಞಾನಸಾಧನಗಳನ್ನು ರೂಢಿಸಿಕೊಂಡಿದ್ದರು. ಮತ್ತು ಮುಮುಕ್ಷುತ್ವಾದಿ ಅನೇಕ ಜನ್ಮಗಳಿಂದುಂಟಾದ ಸಮ್ಯಕ್ ದರ್ಶನವನ್ನು ಪಡೆದು “ಅನೇಕ ಜನ್ಮ ಸಂಸಿದ್ಧ”ರಾಗಿದ್ದರು. ಶ್ರೀ ಗುರುನಾಥರು ಒದಗಿಸಿದ ಮಾಹಿತಿಯ ಮೇರೆಗೆ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರು ಇಂದಿಗೆ (2009 ಇಸವಿ) ಸರಿಸುಮಾರು 450 ವರ್ಷಗಳ ಹಿಂದೆ ಯಳ್ಳಂಬಳಸೆಯಲ್ಲಿ ಜನ್ಮತಾಳಿದರು. ತಾಯಿ-ತಂದೆಯವರ ತಪಸ್ಸಿನ ಫಲವಾದ ಅವರು ಅವತರಿಸಿದ ಶುಭ ತಿಥಿ – ಜ್ಯೇಷ್ಠಮಾಸದ ಬಹುಳ ಬಿದಿಗೆ. ವಾಸಿಷ್ಠೋಪಮನ್ಯು ಗೋತ್ರಭೂಷಣರಾಗಿದ್ದ ಅವರು ಋಗ್ವೇದ ಶಾಖೆಯವರಾಗಿದ್ದರು. ಸಾತ್ವಿಕ ಕುಟುಂಬದ ಮಾತಾಪಿತೃಗಳೂ ಸಹ ಆಗರ್ಭ ಶ್ರೀಮಂತರಾಗಿದ್ದರೂ, ಆತ್ಮಜ್ಞಾನಸಂಪನ್ನರೂ ಸೌಜನ್ಯಾದಿ ಸದ್ಗುಣನಿಧಿಗಳೂ ಕುಲದೇವತೆಯು 10 ಸಮೇತನಾದ ಆಗಿದ್ದರು. ಶ್ರೀನಿವಾಸ. ಶ್ರೀದೇವಿ-ಭೂದೇವಿ ಮನೆದೇವರ ಪವಿತ್ರ ಕ್ಷೇತ್ರ – ಚಿಕ್ಕ ತಿರುಪತಿ ಅಥವಾ ಮಾಲೇಕಲ್ಲು. ಇಷ್ಟದೇವರು – ಶ್ರೀಗೋಪಾಲಕೃಷ್ಣ.